ಅಭಿಪ್ರಾಯ / ಸಲಹೆಗಳು

ನಿರಂತರ ಕಾರ್ಯಕ್ರಮಗಳು

ಕರ್ನಾಟಕದ ಭವ್ಯ ಸಾಂಸ್ಕತಿಕ ಪರಂಪರೆಯ ಸಂರಕ್ಷಣೆ ಮತ್ತು ಅಭಿವೃದ್ಧಿಯ ದೃಷ್ಟಿಯಿಂದ ಸಾಹಿತ್ಯ, ನಾಟಕ, ಸಂಗೀತ, ನೃತ್ಯ, ಲಲಿತಕಲೆ ಮತ್ತು ಜಾನಪದ ಕಲಾಪ್ರಕಾರಗಳ ಪುರೋಭಿವೃದ್ಧಿಗೆ ನಿರ್ದೇನಾಲಯ ಈ ಮುಂದಿನ ಯೋಜನೆಗಳನ್ನು ರೂಪಿಸಿರುತ್ತದೆ.

 

ಸಾಂಸ್ಕೃತಿಕ ಸಂಜೆ

ಭಾರತೀಯ ಸಾಂಸ್ಕತಿಕ ಸಂಬಂಧಗಳ ಪರಿಷತ್ತು, ಯುವಜನಾ ಮತ್ತು ಕ್ರೀಡಾ ಇಲಾಖೆ ಹಾಗೂ ಯುವ ಬರಹಗಾರರ ಮತ್ತು ಕಲಾವಿದರ ಬಳಗದ ಸಹಕಾರದೊಂದಿಗೆ ಬೆಂಗಳೂರು ನಗರದಲ್ಲಿ ಕಳೆದ 17 ವರ್ಷಗಳಿಂದ ಪ್ರತಿ ಶುಕ್ರವಾರ ಸಂಜೆ ಸಾಂಸ್ಕತಿಕ ಕಾರ್ಯಕ್ರಮಗಳನ್ನು ನಗರದ ಯವನಿಕಾ ಸಭಾಂಗಣದಲ್ಲಿ ಯಶಸ್ವಿಯಾಗಿ ನಡೆಸಿಕೊಂಡುಬರಲಾಗುತ್ತಿದೆ.

 

ಚಿಗುರು

ಮಕ್ಕಳಲ್ಲಿರುವ ಸುಪ್ತ ಕಲಾಪ್ರತಿಭೆಯನ್ನು ಗುರುತಿಸಿ ಅವರ ಪ್ರತಿಭೆಯ ಅಭಿವ್ಯಕ್ತಿಗೆ ನಿರಂತರ ವೇದಿಕೆಯೊಂದನ್ನು ನಿಮರ್ಿಸುವ ಸಲುವಾಗಿ ಬೆಂಗಳೂರಿನ ಬಾಲಭವನದಲ್ಲಿ ಪ್ರತಿ ತಿಂಗಳೂ ಸಾಂಸ್ಕತಿಕ ಕಾರ್ಯಕ್ರಮ ಏರ್ಪಡಿಸಿ ಉದಯೋನ್ಮುಖ ಹಾಗೂ ಪ್ರತಿಭಾವಂತ ಮಕ್ಕಳಿಂದ ವಿವಿಧ ರೀತಿಯ ಸಂಗೀತ, ನೃತ್ಯ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ.

 

ಸಾಂಸ್ಕೃತಿಕ ಸೌರಭ

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಪ್ರತಿ ತಿಂಗಳ ಮೂರನೆಯ ಶುಕ್ರವಾರ ಮತ್ತು ಶನಿವಾರ ಎರಡು ದಿನ ಉತ್ಸವ ರೂಪದಲ್ಲಿ ಸಾಂಸ್ಕತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತಿದೆ. ಈ ಯೋಜನೆಯನ್ನು ಬೆಂಗಳೂರು ನಗರದಲ್ಲಿ ವಿಸ್ತಾರಗೊಳಿಸಿ ನಗರದ ವಿವಿಧ ಬಡಾವಣೆಗಳಲ್ಲಿ ನಿರಂತರವಾಗಿ ಸಾಂಸ್ಕತಿಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ.

 

ಕಾವ್ಯ ಕಾವೇರಿ

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕಗಳ ಸಹಯೋಗದೊಂದಿಗೆ ಪ್ರತಿ ತಿಂಗಳ ಮೊದಲನೆಯ ಶನಿವಾರದಂದು ಪ್ರತಿಯೊಂದು ಜಿಲ್ಲೆಯಲ್ಲಿಯೂ ನಡೆಸುವ, ಕನ್ನಡ ಕವಿಗಳ ಭಾವಗೀತೆಗಳ ಗಾಯನ ಕಾರ್ಯಕ್ರಮ.

 

ರಂಗಸುಗ್ಗಿ

ಗ್ರಾಮೀಣ ಪ್ರದೇಶದಲ್ಲಿ ಸುಗ್ಗಿ ಸಮಯದಲ್ಲಿ ರೈತಾಪಿ ಜನರನ್ನು ಸಾಂಸ್ಕತಿಕ ಚಟುವಟಿಕೆಗಳಲ್ಲಿ ತೊಡಗಿಸುವ ಉದ್ದೇಶದಿಂದ ರೈತರೇ ಸೇರಿ ಆಡುವ ಪೌರಾಣಿಕ, ಐತಿಹಾಸಿಕ ನಾಟಕಗಳ ಪ್ರದರ್ಶನಕ್ಕೆ ಧನಸಹಾಯ ನೀಡಲಾಗುತ್ತಿದೆ.

ಸಂಗೀತ ಸುಧೆ

ಉದ್ಯಾನ ನಗರವೆನಿಸಿರುವ, ಬೆಂಗಳೂರಿಗೆ ಆಗಮಿಸುವ ಹೊರನಾಡ, ರಾಷ್ಟ್ರದ ಪ್ರವಾಸಿಗರಿಗೆ ನಾಡಿನ ಸಂಗೀತವನ್ನು ಪರಿಚಯಿಸುವ ಉದ್ದೇಶದಿಂದ ಹಾಗೂ ನಾಡಿನ ಕಲಾವಿದರಿಗೆ ಪ್ರೋತ್ಸಾಹ ನೀಡುವ ದೃಷ್ಟಿಯಿಂದ ಲಾಲ್ಬಾಗ್ನಲ್ಲಿ ಪ್ರತಿ ತಿಂಗಳ ಎರಡನೆಯ ಮತ್ತು ಮೂರನೆಯ ಶನಿವಾರಗಳಂದು ಸಂಗೀತ ಕಾರ್ಯಕ್ರಮವನ್ನು ಏರ್ಪಡಿಸಲಾಗುತ್ತಿದೆ.

 

ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮಗಳು

ಅಂತರರಾಜ್ಯ ಸಾಂಸ್ಕತಿಕ ವಿನಿಮಯ ಕಾರ್ಯಕ್ರಮ ಯೋಜನೆಯಡಿ ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಸಹಯೋಗದೊಂದಿಗೆ ಇತರ ರಾಜ್ಯಗಳ ಕಲಾವಿದರ ಕಾರ್ಯಕ್ರಮಗಳನ್ನು ಕರ್ನಾಟಕದಲ್ಲಿ ಪ್ರಾಯೋಜಿಸಲಾಗುತ್ತಿದೆ. ಅಂತೆಯೇ ಕರ್ನಾಟಕದ ಕಲಾವಿದರನ್ನು ಇತರೆ ರಾಜ್ಯಗಳಿಗೆ ಪ್ರಾಯೋಜಿಸಲಾಗುತ್ತಿದೆ.

 

ದರ್ಶನ (ಗ್ರಾಮೀಣ ಸಂಸ್ಕತಿ ಪ್ರಚಾರ)

ಕನ್ನಡ ಕಾವ್ಯಗಳನ್ನು ಗಮಕ ಕಾವ್ಯವಾಚನದ ಮೂಲಕ ಗ್ರಾಮೀಣ ಜನರ ಬಳಿಗೆ ಕೊಂಡೊಯ್ದು ಜನಪ್ರಿಯಗೊಳಿಸುವ, ಅಂತೆಯೇ ಸಂಗೀತ, ನೃತ್ಯ ಚಿತ್ರಕಲೆಗಳನ್ನು ಶ್ರವ್ಯ - ದೃಶ್ಯ ಮಾಧ್ಯಮಗಳ ಮೂಲಕ ನಿರೂಪಿಸಿ ನಾಡಿನಾದ್ಯಂತ ಪ್ರಚುರಪಡಿಸುವ ಯೋಜನೆ.

 

ಈ ವಲಯ ಸಾಂಸ್ಕತಿಕ ಕೇಂದ್ರಗಳ ಧ್ಯೇಯೋದ್ದೇಶಗಳು ಈ ಮುಂದಿನಂತಿವೆ.

೧.  ವಲಯಕೇಂದ್ರಗಳ ವ್ಯಾಪ್ತಿಯಲ್ಲಿ ಬರುವ ಕಲೆಗಳ ಸಂರಕ್ಷಣೆ, ಪುನಶ್ಚೇತನ, ಪ್ರಸರಣ ಹಾಗೂ ಅಭಿವೃದ್ಧಿ.

೨. ವಲಯಗಳ ವ್ಯಾಪ್ತಿಯಲ್ಲಿ ವಿವಿಧ ಕಲೆಗಳ ಶ್ರೀಮಂತ ವೈವಿಧ್ಯತೆಯನ್ನು ಹಾಗೂ ಅನನ್ಯತೆಯನ್ನು ವೃದ್ಧಿಪಡಿಸಿ ಜನತೆಯಲ್ಲಿ ತಮ್ಮ ಭವ್ಯ ಸಾಂಸ್ಕತಿಕ ಪರಂಪರೆಯನ್ನು ಕುರಿತು ಅರಿವು ಮೂಡಿಸುವುದು.

೩. ಜನಪದ ಮತ್ತು ಬುಡಕಟ್ಟು ಕಲೆಗಳಿಗೆ ಪ್ರೋತ್ಸಾಹ ನೀಡಿ ಅವುಗಳ ಸಂರಕ್ಷಣೆಗೆ ಮತ್ತು ಅವಸಾನದ ಅಂಚಿನಲ್ಲಿರುವ ಈ ಕಲಾಪ್ರಕಾರಗಳಿಗೆ ಚೈತನ್ಯ ತುಂಬುವ ಸಲುವಾಗಿ ವಿಶೇಷ ಕಾರ್ಯಕ್ರಮ ರೂಪಿಸುವುದು.

೪. ಭಾರತದ ಸಾಂಸ್ಕತಿಕ ಪರಂಪರೆ ಕುರಿತು ಯುವಜನತೆಯಲ್ಲಿ ಅರಿವು ಮೂಡಿಸುವ ಸಲುವಾಗಿ ವಿಚಾರಸಂಕಿರಣ, ಸಾಂಸ್ಕತಿಕ ವಿನಿಮಯ ಕಾರ್ಯಕ್ರಮ ಹಾಗೂ ಕಮ್ಮಟಗಳನ್ನು ಏರ್ಪಡಿಸುವುದು

೫. ಈ ಮೇಲ್ಕಂಡ ಧ್ಯೇಯೋದ್ದೇಶಗಳಿಗೆ ಅನುಗುಣವಾದ ಸಂಶೋಧನೆ ಮತ್ತು   ಅಧ್ಯಯನಗಳಿಗೆ ಫೆಲೋಶಿಪ್ ಮತ್ತು ವಿದ್ಯಾರ್ಥಿವೇತನಗಳನ್ನು ನೀಡುವುದು.

 

ಎರಡೂ ವಲಯ ಕೇಂದ್ರಗಳ ಸಹಯೋಗದೊಡನೆ ಕರ್ನಾಟಕದ ಸರ್ಕಾರದ ಕನ್ನಡ ಮತ್ತು ಸಂಸ್ಕತಿ ನಿರ್ದೇಶನಾಲಯವು ವಿವಿಧ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಟಾನಗೊಳಿಸುತ್ತಲಿದೆ

ಇತ್ತೀಚಿನ ನವೀಕರಣ​ : 12-06-2019 12:36 PM ಅನುಮೋದಕರು: Admin



ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕನ್ನಡ ಮತ್ತು ಸಂಸ್ಕೃತಿ ಸಚಿವಾಲಯ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080