ಅಭಿಪ್ರಾಯ / ಸಲಹೆಗಳು

ಸಂಸ್ಕೃತಿ ಪ್ರೋತ್ಸಾಹಕ ಯೋಜನೆಗಳು

ಪ್ರಕಟಿತ ಗ್ರಂಥಗಳಿಗೆ ಧನಸಹಾಯ :

ಸಾಹಿತ್ಯ ಮತ್ತು ಸಾಂಸ್ಕತಿಕ, ವಿಮರ್ಶಾತ್ಮಕ ಸ್ವರೂಪದ ಗ್ರಂಥಗಳಿಗೆ ಧನಸಹಾಯ ನೀಡುವ ಯೋಜನೆಯಿದು. ಕತೆ, ಕಾದಂಬರಿ, ನಾಟಕ, ಕವನ ಮುಂತಾದ ಸೃಜನಶೀಲ ಪ್ರಕಾರಗಳನ್ನು ಬಿಟ್ಟು ಸೃಜನೇತರ ಪ್ರಕಾರಗಳಲ್ಲಿ ಬರುವ ವಿಮರ್ಶೆ, ಸಾಂಸ್ಕತಿಕ ವಿಶ್ಲೇಷಣೆ, ಜೀವನ ಚರಿತ್ರೆ ಮುಂತಾದ ಪುಸ್ತಕಗಳಿಗೆ ಧನಸಹಾಯವನ್ನು ನೀಡಲಾಗುವುದು

 

ಗೌರವಧನ ಮತ್ತು ಮಾಸಾಶನ:

ಸಾಹಿತ್ಯ, ಸಂಗೀತ, ನೃತ್ಯ, ನಾಟಕ, ಜಾನಪದ, ಸಮಾಜಸೇವೆ ಮುಂತಾದ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿ, ಈಗ ಕಷ್ಟ ಪರಿಸ್ಥಿತಿಯಲ್ಲಿರುವ ವಯಸ್ಕ ಕಲಾವಿದರಿಗೆ, ಸಾಹಿತಿಗಳಿಗೆ ಪ್ರತಿ ತಿಂಗಳೂ ಗೌರವಧನ, ಮಾಸಾಶನವನ್ನು ನೀಡಲಾಗುತ್ತಿದೆ. ಇದಲ್ಲದೆ ರಾಷ್ಟ್ರಮಟ್ಟದ ಪ್ರಶಸ್ತಿ ಹಾಗೂ ಕೇಂದ್ರ ಅಕಾಡೆಮಿಗಳಿಂದ ಪ್ರಶಸ್ತಿ ಪಡೆದ ಗಣ್ಯರಿಗೂ ಗೌರವಧನ ನೀಡಲಾಗುವುದು.

 

ಸಾಹಿತಿ ಕಲಾವಿದವರಿಗೆ ವೈದ್ಯಕೀಯ ನೆರವು:

ಸಾಹಿತ್ಯ, ಸಂಗೀತ, ನೃತ್ಯ, ನಾಟಕ, ಲಲಿತಕಲೆ, ಜಾನಪದ, ಯಕ್ಷಗಾನ ಮುಂತಾದ ಕ್ಷೇತ್ರಗಳಲ್ಲಿ ಅವಿರತ ಸಾಧನೆ ಮಾಡಿ ಅಕಾಡೆಮಿ ಅಥವಾ ರಾಜ್ಯ ಸರ್ಕಾರದಿಂದ ಪುರಸ್ಕತವಾಗಿದ್ದು ಈಗ ಅನಾರೋಗ್ಯ ಪೀಡಿತರಾಗಿರುವ ಸಾಹಿತಿ ಕಲಾವಿದರಿಗೆ ವೈದ್ಯಕೀಯ ವೆಚ್ಚವನ್ನು ನಿಯಮಾನುಸಾರ ಮರುಪಾವತಿ ಮಾಡಲಾಗುವುದು.

 

ಹೊರನಾಡ ಕನ್ನಡ ಸಂಸ್ಥೆಗಳಿಗೆ ನೆರವು:

ಕನ್ನಡ ಭಾಷೆ, ಸಾಹಿತ್ಯ ಮತ್ತು ಸಾಂಸ್ಕತಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಹೊರರಾಜ್ಯಗಳಲ್ಲಿರುವ ಕನ್ನಡ ಸಂಘ ಸಂಸ್ಥೆಗಳಿಗೆ ಕಟ್ಟಡ ನಿರ್ಮಾಣ, ಸಲಕರಣೆಗಳ ಖರೀದಿ, ಕನ್ನಡ ಶಾಲಾಭಿವೃದ್ಧಿ ಹಾಗೂ ಕನ್ನಡಪರ ಕಾರ್ಯನಿರ್ವಹಣೆ ಮತ್ತು ಇನ್ನಿತರ ಸಾಂಸ್ಕತಿಕ ಚಟುವಟಿಕೆಗಳಿಗೆ ಧನಸಹಾಯ ನೀಡಲಾಗುವುದು.

 

ಸಾಕ್ಷ್ಯಚಿತ್ರಗಳ ನಿರ್ಮಾಣ:

ಕನ್ನಡ ನಾಡು, ನುಡಿ, ಸಂಸ್ಕತಿಗಳಿಗೆ ಅಪಾರ ಕೊಡುಗೆ ನೀಡಿರುವ ಗಣ್ಯರ ಕುರಿತು ಸಾಕ್ಷ್ಯಚಿತ್ರಗಳನ್ನು ಈ ಯೋಜನೆಯಡಿ ನಿರ್ಮಿಸಲಾಗುವುದು.

 

ಇತ್ತೀಚಿನ ನವೀಕರಣ​ : 12-06-2019 02:34 PM ಅನುಮೋದಕರು: Adminಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕನ್ನಡ ಮತ್ತು ಸಂಸ್ಕೃತಿ ಸಚಿವಾಲಯ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080