ಅಭಿಪ್ರಾಯ / ಸಲಹೆಗಳು

ಪ್ರಶಸ್ತಿಗಳು

ಕರ್ನಾಟಕ ಸರ್ಕಾರವು ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಕಲಾವಿದರು/ ಸಾಹಿತಿಗಳು/ಗಣ್ಯರಿಗೆ ನೀಡುತ್ತಿರುವ ವಿವಿಧ ಪ್ರಶಸ್ತಿಗಳ ವಿವರ ಹಾಗೂ ಪ್ರಶಸ್ತಿ ಮೊತ್ತ

ನಾಡಿನ ಅಥವಾ ರಾಷ್ಟ್ರದ ಮಹಾನ್ ವ್ಯಕ್ತಿಗಳ ಹೆಸರನ್ನು ಅವರ ಕಾರ್ಯಸಾಧನೆಯನ್ನು ಸ್ಮರಿಸುವ, ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಅಂತಹವರ ಹೆಸರಲ್ಲಿ ಆ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಪ್ರಶಸ್ತಿ ನೀಡಲಾಗುತ್ತದೆ. ಅಲ್ಲದೆ ಒಂದು ಕ್ಷೇತ್ರದ ಹೆಸರಲ್ಲಿ (ಸಾಹಿತ್ಯ, ನೃತ್ಯ, ನಾಟಕ, ಲಲಿತಕಲೆ.....) ಪ್ರಶಸ್ತಿ ಸ್ಥಾಪಿಸಿ ಆ ಕ್ಷೇತ್ರದ ಸಾಧನೆಗೈದವರಿಗೆ ಪ್ರಶಸ್ತಿ ನೀಡಲಾಗುತ್ತದೆ. ಅಂಥವುಗಳಲ್ಲಿ ಕರ್ನಾಟಕದಲ್ಲಿ ಕರ್ನಾಟಕ ರತ್ನ  ಪ್ರಶಸ್ತಿ, ರಾಜ್ಯ ಪ್ರಶಸ್ತಿ, ರಾಜ್ಯ ಸಂಗೀತ ವಿದ್ವಾನ್ ಪುರಸ್ಕಾರ ಹಾಗೂ ಅಕಾಡಮಿಗಳು ನೀಡುವ ಪ್ರಶಸ್ತಿಗಳನ್ನು ಈ ಕ್ಷೇತ್ರದಲ್ಲಿ ಅಳವಡಿಸಲಾಗಿದೆ. ಇದಲ್ಲದೆ ವ್ಯಕ್ತಿಗಳ ಸಾಧನೆಯ ಸ್ಮರಣಾರ್ಥ ಪ್ರಶಸ್ತಿಗಳನ್ನು ನೀಡಬಯಸಿ ಆಯಾ ಕ್ಷೇತ್ರದಲ್ಲಿ ಸಾಧನೆಗೈದವರಿಗೆ ವಿಶೇಷ ಪ್ರಶಸ್ತಿ ನೀಡಲಾಗುತ್ತದೆ. ಅವುಗಳಲ್ಲಿ ಪಂಪ ಪ್ರಶಸ್ತಿ, ಟಿ.ಚೌಡಯ್ಯ ಪ್ರಶಸ್ತಿ(ರಾಷ್ಟ್ರ ಮಟ್ಟ), ದಾನಚಿಂತಾಮಣಿ ಅತ್ತಿಮಬ್ಷೆ ಪ್ರಶಸ್ತಿ, ಶಾಂತಲಾ ನಾಟ್ಯ ಪ್ರಶಸ್ತಿ, ಸಂತ ಶಿಶುನಾಳ ಶರೀಫ್ ಪ್ರಶಸ್ತಿ, ಜಕಣಾಚಾರಿ ಪ್ರಶಸ್ತಿ, ಶ್ರೀ ಕನಕ-ಪುರಂದರ ಪ್ರಶಸ್ತಿ, ಡಾ. ಗುಬ್ಷಿವೀರಣ್ಣ ಪ್ರಶಸ್ತಿ, ಜಾನಪದ ಶ್ರೀ ಪ್ರಶಸ್ತಿ, ವರ್ಣಶಿಲ್ಪಿ ವೆಂಕಟಪ್ಪ ಪ್ರಶಸ್ತಿಗಳನ್ನು ಹೆಸರಿಸಬಹುದು. ರಾಷ್ಟ್ರಮಟ್ಟದಲ್ಲೂ ಜ್ಞಾನಪೀ� ಪ್ರಶಸ್ತಿ, ಪದ್ಮಭೂಷಣ, ಪದ್ಮಶ್ರೀ, ಪದ್ಮವಿಭೂಷಣ, ಭಾರತರತ್ನ, ದಾದಾ ಫಾಲ್ಕೆ ಪ್ರಶಸ್ತಿ, ಕೇಂದ್ರ ಸಾಹಿತ್ಯ, ಲಲಿತಕಲೆ ಹಾಗೂ ಸಂಗೀತ ನಾಟಕ ಅಕಾಡಮಿ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುತ್ತದೆ.
 

ರಾಜ್ಯ ಪ್ರಶಸ್ತಿಗಳು

  1. ನಿಜಗುಣ ಪುರಂದರ ಪ್ರಶಸ್ತಿ : ಕರ್ನಾಟಕ ಸಂಗೀತ, ಹಿಂದೂಸ್ಥಾನಿ ಸಂಗೀತ, ಗಾಯನ ಮತ್ತು ವಾದನ ಕ್ಷೇತ್ರದಲ್ಲಿ ಹಾಗೂ ಕಥಾ ಕೀರ್ತನೆ ಕ್ಷೇತ್ರದಲ್ಲಿ ಅನುಪಮ ಸೇವೆ ಸಲ್ಲಿಸಿದ ಸಂಗೀತಗಾರರಿಗೆ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ. ಈ ಪ್ರಶಸ್ತಿಯು ಪ್ರಶಸ್ತಿ ಪುತ್ಥಳಿ, ಫಲಕ, ಶಾಲು, ಹಾರ ಹಾಗೂ 3.00 ಲಕ್ಷ(ಮೂರು ಲಕ್ಷ ರೂಪಾಯಿ ಮಾತ್ರ)ಗಳ ನಗದನ್ನು ಒಳಗೊಂಡಿರುತ್ತದೆ.
  2. ಡಾ: ಗುಬ್ಬಿವೀರಣ್ಣ ಪ್ರಶಸ್ತಿ : ವೃತ್ತಿ ರಂಗಭೂಮಿಯಲ್ಲಿ ಗಣನೀಯ ಸೇವೆ ಸಲ್ಲಿಸಿದ ಕಲಾವಿದರಿಗೆ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ. ಈ ಪ್ರಶಸ್ತಿಯು ಪ್ರಶಸ್ತಿ ಪುತ್ಥಳಿ, ಫಲಕ, ಶಾಲು, ಹಾರ ಹಾಗೂ 3.00 ಲಕ್ಷ(ಮೂರು ಲಕ್ಷ ರೂಪಾಯಿ ಮಾತ್ರ)ಗಳ ನಗದನ್ನು ಒಳಗೊಂಡಿರುತ್ತದೆ.
  3. ವರ್ಣಶಿಲ್ಪಿ ವೆಂಕಟಪ್ಪ ಪ್ರಶಸ್ತಿ : ಚಿತ್ರಕಲಾ ಕ್ಷೇತ್ರಕ್ಕೆ ಮಹತ್ವದ ಕೊಡುಗೆಯನ್ನು ನೀಡಿದ ಕರ್ನಾಟಕದ ಅತ್ಯುತ್ತಮ ಚಿತ್ರಕಲಾವಿದರಿಗೆ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ. ಈ ಪ್ರಶಸ್ತಿಯು ಪ್ರಶಸ್ತಿ ಪುತ್ಥಳಿ, ಫಲಕ, ಶಾಲು, ಹಾರ ಹಾಗೂ 3.00 ಲಕ್ಷ(ಮೂರು ಲಕ್ಷ ರೂಪಾಯಿ ಮಾತ್ರ)ಗಳ ನಗದನ್ನು ಒಳಗೊಂಡಿರುತ್ತದೆ.
  4. ಜಾನಪದ ಶ್ರೀ ಪ್ರಶಸ್ತಿ : ಜಾನಪದ ಕ್ಷೇತ್ರಕ್ಕೆ ನೀಡಿದ ಅತ್ಯುನ್ನತ ಕೊಡುಗೆಯನ್ನು ಪರಿಗಣಿಸಿ, ಕರ್ನಾಟಕದ ಅತ್ಯುತ್ತಮ ಜಾನಪದ ಕಲಾವಿದರಿಗೆ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ. ಈ ಪ್ರಶಸ್ತಿಯು ಪ್ರಶಸ್ತಿ ಪುತ್ಥಳಿ, ಫಲಕ, ಶಾಲು, ಹಾರ ಹಾಗೂ 3.00 ಲಕ್ಷ(ಮೂರು ಲಕ್ಷ ರೂಪಾಯಿ ಮಾತ್ರ)ಗಳ ನಗದನ್ನು ಒಳಗೊಂಡಿರುತ್ತದೆ.
  5. ಶಾಂತಲಾ ನಾಟ್ಯ ಪ್ರಶಸ್ತಿ : ಶಾಸ್ತ್ರೀಯ ನೃತ್ಯ ಕ್ಷೇತ್ರದಲ್ಲಿ ಅನುಪಮ ಸೇವೆ ಸಲ್ಲಿಸಿದ ಕರ್ನಾಟಕದ ಹಿರಿಯ ನೃತ್ಯ ಕಲಾವಿದರಿಗೆ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ. ಈ ಪ್ರಶಸ್ತಿಯು ಪ್ರಶಸ್ತಿ ಪುತ್ಥಳಿ, ಫಲಕ, ಶಾಲು, ಹಾರ ಹಾಗೂ 3.00 ಲಕ್ಷ(ಮೂರು ಲಕ್ಷ ರೂಪಾಯಿ ಮಾತ್ರ)ಗಳ ನಗದನ್ನು ಒಳಗೊಂಡಿರುತ್ತದೆ.
  6. ಜಕಣಾಚಾರಿ ಪ್ರಶಸ್ತಿ : ಶಿಲ್ಪಕಲೆ ಕ್ಷೇತ್ರದಲ್ಲಿ ಅಪೂರ್ವ ಸೇವೆ ಸಲ್ಲಿಸಿದ ಶಿಲ್ಪಕಲಾವಿದರಿಗೆ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ. ಈ ಪ್ರಶಸ್ತಿಯು ಪ್ರಶಸ್ತಿ ಪುತ್ಥಳಿ, ಫಲಕ, ಶಾಲು, ಹಾರ ಹಾಗೂ 3.00 ಲಕ್ಷ(ಮೂರು ಲಕ್ಷ ರೂಪಾಯಿ ಮಾತ್ರ)ಗಳ ನಗದನ್ನು ಒಳಗೊಂಡಿರುತ್ತದೆ.
  7. ಸಂತ ಶಿಶುನಾಳ ಷರೀಫ ಪ್ರಶಸ್ತಿ : ಸುಗಮ ಸಂಗೀತ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಗಣ್ಯರಿಗೆ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ. ಈ ಪ್ರಶಸ್ತಿಯು ಪ್ರಶಸ್ತಿ ಪುತ್ಥಳಿ, ಫಲಕ, ಶಾಲು, ಹಾರ ಹಾಗೂ 3.00 ಲಕ್ಷ(ಮೂರು ಲಕ್ಷ ರೂಪಾಯಿ ಮಾತ್ರ)ಗಳ ನಗದನ್ನು ಒಳಗೊಂಡಿರುತ್ತದೆ.
  8. ಕುಮಾರವ್ಯಾಸ ಪ್ರಶಸ್ತಿ : ಗಮಕ ವಾಚನ ಮತ್ತು ವ್ಯಾಖ್ಯಾನದಲ್ಲಿ ಹೆಸರು ಮಾಡಿರುವ ಹಿರಿಯ ಗಮಕ ಕಲಾವಿದರಿಗೆ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ. ಈ ಪ್ರಶಸ್ತಿಯು ಪ್ರಶಸ್ತಿ ಪುತ್ಥಳಿ, ಫಲಕ, ಶಾಲು, ಹಾರ ಹಾಗೂ 3.00 ಲಕ್ಷ(ಮೂರು ಲಕ್ಷ ರೂಪಾಯಿ ಮಾತ್ರ)ಗಳ ನಗದನ್ನು ಒಳಗೊಂಡಿರುತ್ತದೆ.
  9. ಪಂಪ ಪ್ರಶಸ್ತಿ : ಸಾಹಿತ್ಯ ಕ್ಷೇತ್ರದಲ್ಲಿ ಸುಧೀರ್ಘ ಸೇವೆ ಸಲ್ಲಿಸಿದ ಹಾಗೂ ಅನನ್ಯ ಕೊಡುಗೆಯನ್ನು ನೀಡಿರುವ ಸಾಹಿತಿಗಳಿಗೆ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ. ಈ ಪ್ರಶಸ್ತಿಯು ಪ್ರಶಸ್ತಿ ಪುತ್ಥಳಿ, ಫಲಕ, ಶಾಲು, ಹಾರ ಹಾಗೂ 3.00ಲಕ್ಷ (ಮೂರು ಲಕ್ಷ ರೂಪಾಯಿ ಮಾತ್ರ)ಗಳ ನಗದನ್ನು ಒಳಗೊಂಡಿರುತ್ತದೆ.
  10. ಪ್ರೊ|| ಕೆ.ಜಿ ಕುಂದಣಗಾರ ಗಡಿನಾಡ ಸಾಹಿತ್ಯ ಪ್ರಶಸ್ತಿ : ಕರ್ನಾಟಕದ ಗಡಿ ಭಾಗದಲ್ಲಿದ್ದು, ಸಾಹಿತ್ಯ ಮತ್ತು ಸಂಶೋಧನೆಯಲ್ಲಿ ಅಪರಿಮಿತವಾದ ಸೇವೆ ಸಲ್ಲಿಸಿದ ವಿದ್ವಾಂಸರಿಗೆ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ. ಈ ಪ್ರಶಸ್ತಿಯು ಪ್ರಶಸ್ತಿ ಪುತ್ಥಳಿ, ಫಲಕ, ಶಾಲು, ಹಾರ ಹಾಗೂ 3.00ಲಕ್ಷ (ಮೂರು ಲಕ್ಷ ರೂಪಾಯಿ ಮಾತ್ರ)ಗಳ ನಗದನ್ನು ಒಳಗೊಂಡಿರುತ್ತದೆ.
  11. ದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ : ಸಾಹಿತ್ಯ ಕ್ಷೇತ್ರದಲ್ಲಿ ಅನುಪಮ ಸೇವೆ ಸಲ್ಲಿಸಿದ ಮಹಿಳಾ ಸಾಹಿತಿಗಳಿಗೆ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ. ಈ ಪ್ರಶಸ್ತಿಯು ಪ್ರಶಸ್ತಿ ಪುತ್ಥಳಿ, ಫಲಕ, ಶಾಲು, ಹಾರ ಹಾಗೂ 3.00ಲಕ್ಷ (ಮೂರು ಲಕ್ಷ ರೂಪಾಯಿ ಮಾತ್ರ)ಗಳ ನಗದನ್ನು ಒಳಗೊಂಡಿರುತ್ತದೆ.
  12. ಸಂಗೊಳ್ಳಿ ರಾಯಣ್ಣ ಪ್ರಶಸ್ತಿ : ಕನ್ನಡ ನಾಡಿನ ನೆಲ, ಜಲ, ಭಾಷೆ, ಸಂಸ್ಕøತಿಗಾಗಿ ನಿಸ್ವಾರ್ಥದಿಂದ ಹೋರಾಡಿದವರನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ. ಈ ಪ್ರಶಸ್ತಿಯು ಪ್ರಶಸ್ತಿ ಪುತ್ಥಳಿ, ಫಲಕ, ಶಾಲು, ಹಾರ ಹಾಗೂ 3.00ಲಕ್ಷ (ಮೂರು ಲಕ್ಷ ರೂಪಾಯಿ ಮಾತ್ರ)ಗಳ ನಗದನ್ನು ಒಳಗೊಂಡಿರುತ್ತದೆ.
  13. ಬಿ.ವಿ. ಕಾರಂತ ಪ್ರಶಸ್ತಿ : ಹವ್ಯಾಸಿ ರಂಗಭೂಮಿಯಲ್ಲಿ ಗಣನೀಯ ಸೇವೆ ಸಲ್ಲಿಸಿದ ಕಲಾವಿದರಿಗೆ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ. ಈ ಪ್ರಶಸ್ತಿಯು ಪ್ರಶಸ್ತಿ ಪುತ್ಥಳಿ, ಫಲಕ, ಶಾಲು, ಹಾರ ಹಾಗೂ 3.00ಲಕ್ಷ (ಮೂರು ಲಕ್ಷ ರೂಪಾಯಿ ಮಾತ್ರ)ಗಳ ನಗದನ್ನು ಒಳಗೊಂಡಿರುತ್ತದೆ.
  14. ಕನಕ ಶ್ರೀ ಪ್ರಶಸ್ತಿ : ಕನಕದಾಸರ ಜೀವನ, ಸಾಹಿತ್ಯ ಸಂದೇಶ ಮತ್ತು ಸಮಾಜಕ್ಕೆ ಅವರು ನೀಡಿದ ದಾರ್ಶನಿಕ ಕೊಡುಗೆ ಕುರಿತಂತೆ ಅನನ್ಯ ಸೇವೆ ಸಲ್ಲಿಸಿರುವ ವಿದ್ವಾಂಸರಿಗೆ / ಸಂಶೋಧಕರಿಗೆ / ಲೇಖಕರಿಗೆ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ. ಈ ಪ್ರಶಸ್ತಿಯು ಪ್ರಶಸ್ತಿ ಪುತ್ಥಳಿ, ಫಲಕ, ಶಾಲು, ಹಾರ ಹಾಗೂ 5.00ಲಕ್ಷ (ಐದು ಲಕ್ಷ ರೂಪಾಯಿ ಮಾತ್ರ)ಗಳ ನಗದನ್ನು ಒಳಗೊಂಡಿರುತ್ತದೆ.
  15. ಕರ್ನಾಟಕ ರತ್ನ ಪ್ರಶಸ್ತಿ : ಸಾಂಸ್ಕøತಿಕ, ವೈಜ್ಞಾನಿಕ, ಮಾನವಿಕ, ಸಾಮಾಜಿಕ ಹಾಗೂ ಆರ್ಥಿಕ ಕ್ಷೇತ್ರಗಳಲ್ಲಿ ಅತ್ಯಂತ ಗಣನೀಯ ಸೇವೆಯನ್ನು ಸಲ್ಲಿಸಿರುವ ಗಣ್ಯರಿಗೆ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ. ಈ ಪ್ರಶಸ್ತಿಯು 50 ಗ್ರಾಂ ಚಿನ್ನವನ್ನು ಒಳಗೊಂಡಿರುತ್ತದೆ.
  16. ರಾಜ್ಯ ಸಂಗೀತ ವಿದ್ವಾನ್ ಗೌರವ ಪ್ರಶಸ್ತಿ : ಕರ್ನಾಟಕ ಸಂಗೀತ ಪರಂಪರೆಯನ್ನು ಉಳಿಸಿ ಬೆಳೆಸಿ ಸಾಂಸ್ಕøತಿಕ ಕ್ಷೇತ್ರಕ್ಕೆ ಅನುಪಮ ಸೇವೆ ಸಲ್ಲಿಸಿದ ಸಂಗೀತ ವಿದ್ವಾಂಸರಿಗೆ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ. ಈ ಪ್ರಶಸ್ತಿಯು ಪ್ರಶಸ್ತಿ ಪುತ್ಥಳಿ, ಫಲಕ, ಶಾಲು, ಹಾರ ಹಾಗೂ 2,000-00 (ರೂಪಾಯಿ ಎರಡು ಸಾವಿರ ಮಾತ್ರ)ಗಳ ಗೌರವ ಧನವನ್ನು ಒಳಗೊಂಡಿರುತ್ತದೆ.

 

ಇತ್ತೀಚಿನ ನವೀಕರಣ​ : 12-06-2019 02:38 PM ಅನುಮೋದಕರು: Admin



ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕನ್ನಡ ಮತ್ತು ಸಂಸ್ಕೃತಿ ಸಚಿವಾಲಯ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080