ಅಭಿಪ್ರಾಯ / ಸಲಹೆಗಳು

ವಿಶೇಷ ಘಟಕ ಯೋಜನೆಗಳು

                                                                    ವಿಶೇಷ ಘಟಕ ಯೋಜನೆಗಳು

ನಾಡಿನಲ್ಲಿ ವಾಸವಾಗಿರುವ ಶೋಷಿತ, ದಮನಿತ, ನಿರ್ಲಕ್ಷಿತ ಸಮುದಾಯಕ್ಕೆ ವಿಶೇಷ ಪ್ರೋತ್ಸಾಹ ನೀಡಿ ಸಮಾಜದ ಮುಖ್ಯವಾಹಿನಿಗೆ ಕರೆತರುವ ಸದುದ್ದೇಶದಿಂದ ಸರ್ಕಾರವು ವಿಶೇಷ ಘಟಕ ಯೋಜನೆ ಎಂಬ ಲೆಕ್ಕ ಶೀರ್ಷಿಕೆಯಡಿ ವಿಶೇಷ ನಿಧಿಯನ್ನು ಸ್ಥಾಪಿಸಿ, ಪ್ರತ್ಯೇಕ ಅನುದಾನವನ್ನು ಮಂಜೂರು ಮಾಡಿ, ಪರಿಶಿಷ್ಟ ವರ್ಗದ(ಎಸ್.ಸಿ) ಕಲಾವಿದರು ಮತ್ತು ಸಂಸ್ಥೆಗಳು ತಮ್ಮ ಪ್ರತಿಭಾ ಪ್ರದರ್ಶನಕ್ಕೆ ಅವಕಾಶಗಳನ್ನು ಮತ್ತು ಆರ್ಥಿಕ ನೆರವನ್ನು ಒದಗಿಸುತ್ತಿದೆ.

ವಿಶೇಷ ಘಟಕ ಯೋಜನೆಯಡಿಯಲ್ಲಿ ಜನಪರ ಉತ್ಸವಗಳು, ಕನ್ನಡ ಭಾಷೆಯಲ್ಲಿ ಎಂ.ಫಿಲ್ ಮತ್ತು ಪಿ.ಎಚ್.ಡಿ ಸಂಶೋಧನಾ ಪ್ರಬಂಧ ರಚಿಸಿದ ಪರಿಶಿಷ್ಟ ಪಂಗಡದ ಸಂಶೋಧಕರಿಗೆ ಹಸ್ತಪ್ರತಿ ಮುದ್ರಣಕ್ಕೆ ಧನಸಹಾಯ, ಪರಿಶಿಷ್ಟ ವರ್ಗದ ಸಂಗೀತ ಕಲಾವಿದರು ಮತ್ತು ಜನಪದ ಕಲಾವಿದರಿಗೆ ವಾದ್ಯ ಪರಿಕರ ಮತ್ತು ವೇಷಭೂಷಣ ಖರೀದಿ ನೆರವು, ಪರಿಶೀಷ್ಟ ವರ್ಗದ ಸಂಸ್ಥೆಗಳಿಗೆ ಧನಸಹಾಯ ಯೋಜನೆಗಳು, ಸಂಗೀತ, ನೃತ್ಯ, ಶಿಲ್ಪಕಲೆ, ಜನಪದ ತರಬೇತಿ ಕಾರ್ಯಕ್ರಮಗಳಿಗೆ ಗುರು-ಶಿಷ್ಯ ಪರಂಪರೆಯ ಅಡಿಯಲ್ಲಿ ಗುರುಕುಲ ಮಾದರಿಯ ಶಿಕ್ಷಣಕ್ಕೆ ಅನುದಾನ ನೀಡಲಾಗುತ್ತಿದೆ.

ರಾಜ್ಯದ ಪರಿಶಿಷ್ಟ ಜಾತಿ/ಪಂಗಡಗಳ ಕಲಾವಿದರು, ಲೇಖಕರು ಹಾಗೂ ಸಾಂಸ್ಕತಿಕ ಪರ ಸಂಘ ಸಂಸ್ಥೆಗಳನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಈ ಯೋಜನೆಯಡಿ ವಿವಿಧ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಸಾಂಸ್ಕತಿಕ ಕಾರ್ಯಕ್ರಮಗಳ ಪ್ರಾಯೋಜನೆ

ಗಿರಿಜನ ಉಪಯೋಜನೆಗಳು

ನಾಡಿನ ವಿವಿಧ ಭಾಗಗಳಲ್ಲಿ ವಾಸಿಸುತ್ತಿರುವ ಗಿರಿಜನ ಸಮುದಾಯವನ್ನು ವಿಶೇಷವಾಗಿ ಸಮಾಜದ ಮುಖ್ಯವಾಹಿನಿಗೆ ಕರೆತರುವ ಸದುದ್ದೇಶದಿಂದ ಸರ್ಕಾರವು ಗಿರಿಜನ ಉಪಯೋಜನೆಯಡಿ ವಿಶೇಷ ನಿಧಿಯನ್ನು ಸ್ಥಾಪಿಸಿ, ಪ್ರತ್ಯೇಕ ಅನುದಾನವನ್ನು ಮಂಜೂರು ಮಾಡಿ, ಪರಿಶಿಷ್ಟ ಪಂಗಡದ(ಎಸ್.ಟಿ) ಕಲಾವಿದರು ಮತ್ತು ಸಂಸ್ಥೆಗಳು ತಮ್ಮ ಪ್ರತಿಭಾ ಪ್ರದರ್ಶನಕ್ಕೆ ಅವಕಾಶಗಳನ್ನು ಮತ್ತು ಆರ್ಥಿಕ ನೆರವನ್ನು ಒದಗಿಸುತ್ತಿದೆ.

ಗಿರಿಜನ ಉಪಯೋಜನೆಯಡಿಯಲ್ಲಿ ಜನಪರ ಉತ್ಸವಗಳು, ಕನ್ನಡ ಭಾಷೆಯಲ್ಲಿ ಎಂ.ಫಿಲ್ ಮತ್ತು ಪಿ.ಎಚ್.ಡಿ ಸಂಶೋಧನಾ ಪ್ರಬಂಧ ರಚಿಸಿದ ಪರಿಶಿಷ್ಟ ಪಂಗಡದ ಸಂಶೋಧಕರಿಗೆ ಹಸ್ತಪ್ರತಿ ಮುದ್ರಣಕ್ಕೆ ಧನಸಹಾಯ, ಪರಿಶಿಷ್ಟ ಪಂಗಡದ ಸಂಗೀತ ಕಲಾವಿದರು ಮತ್ತು ಜನಪದ ಕಲಾವಿದರಿಗೆ ವಾದ್ಯ ಪರಿಕರ ಮತ್ತು ವೇಷಭೂಷಣ ಖರೀದಿ ನೆರವು, ಪರಿಶಿಷ್ಟ ಪಂಗಡದ ಸಂಸ್ಥೆಗಳಿಗೆ ಧನಸಹಾಯ ಯೋಜನೆಗಳು, ಸಂಗೀತ, ನೃತ್ಯ, ಶಿಲ್ಪಕಲೆ, ಜನಪದ ತರಬೇತಿ ಕಾರ್ಯಕ್ರಮಗಳಿಗೆ ಗುರು-ಶಿಷ್ಯ ಪರಂಪರೆಯ ಅಡಿಯಲ್ಲಿ ಗುರುಕುಲ ಮಾದರಿಯ ಶೀಕ್ಷಣಕ್ಕೆ ಅನುದಾನ ನೀಡಲಾಗುತ್ತಿದೆ

ಗಡಿನಾಡು ಮತ್ತು ಹೊರನಾಡು ಕಾರ್ಯಕ್ರಮಗಳು

ಹೊರನಾಡು ಕಾರ್ಯಕ್ರಮಗಳು

ಹೊರನಾಡು ಮತ್ತು ಹೊರದೇಶಗಳಲ್ಲಿರುವ ಕನ್ನಡಿಗರು ಮಾನಸಿಕವಾಗಿ ಕನ್ನಡ ನಾಡಿನ ಜೊತೆ ತಾದಾತ್ಮ್ಯ ಹೊಂದಿದ್ದರೂ ಭೌಗೋಳಿಕ ಕಾರಣಗಳಿಗಾಗಿ ಕನ್ನಡ ನಾಡಿನ ಭಾಷೆ ಮತ್ತು ಸಂಸ್ಕೃತಿಯ ಜೊತೆ ನಿರಂತರ ಸಂಪರ್ಕ ಸಾಧಿಸಲು ಸಾಧ್ಯವಾಗಿರುವುದಿಲ್ಲ. ಇದಕ್ಕೆ ಪರಿಹಾರರೂಪವಾಗಿ ಕನ್ನಡ ನಾಡಿನ ಹಿರಿಯ ಕಲಾವಿದರು ಮತ್ತು ಸಾಹಿತಿಗಳನ್ನು ಹೊರನಾಡಿನ ಮತ್ತು ಹೊರದೇಶದ ಉತ್ಸವಗಳನ್ನು ಆಯೋಜಿಸಿ ಅಲ್ಲಿ ಕಲೆ ಪ್ರದರ್ಶಿಸುವ ಮೂಲಕ ಭಾವನಾತ್ಮಕವಾಗಿ ಅಲ್ಲಿನ ಕನ್ನಡಿಗರನ್ನು ತಾಯ್ನಾಡಿನೊಂದಿಗೆ ಬೆಸೆಯುವ ಅಪರೂಪದ ಪ್ರಯತ್ನವಾಗಿ ಈ ಉತ್ಸವಗಳನ್ನು ಆಯೋಜಿಸಲಾಗುತ್ತಿದೆ.

೧.   ಪರಿಶಿಷ್ಟ ಜಾತಿ/ಪಂಗಡಗಳಲ್ಲಿ ಅಸಂಖ್ಯಾತ ಜಾನಪದ ಕಲಾವಿದರು, ಕಲಾಪ್ರಕಾರಗಳು ಹಾಸುಹೊಕ್ಕಾಗಿವೆ. ಅವಕಾಶವಿಲ್ಲದೆ ಸಾಕಷ್ಟು ಕಲಾವಿದರಿಗೆ ತಮ್ಮಕಲಾಪ್ರತಿಭೆಯನ್ನು ಪ್ರದರ್ಶಿಸಲು ಸಾಧ್ಯವಾಗಿಲ್ಲ.

      ಇಂತಹ ಕಲಾಪ್ರಕಾರಗಳಿಗೆ, ಕಲಾವಿದರಿಗೆ ಅವಕಾಶ ನೀಡುವ ಹಾಗೂ ಪ್ರೋತ್ಸಾಹಿಸುವ ದೃಷ್ಟಿಯಿಂದ ಇಲಾಖೆಯ ಮೂಲಕ ಕಾರ್ಯಕ್ರಮಗಳನ್ನು ಪ್ರಾಯೋಜಿಸಲಾಗುವುದು.

೨.   ಪರಿಶಿಷ್ಟ ಜಾತಿ/ಪಂಗಡಗಳ ಸಂಘ ಸಂಸ್ಥೆಗಳು ಏರ್ಪಡಿಸುವ ಸಾಂಸ್ಕತಿಕ ಉತ್ಸವಗಳಲ್ಲಿ, ವಿಶೇಷ ಸಂದರ್ಭಗಳಲ್ಲಿ ಕಾರ್ಯಕ್ರಮಗಳನ್ನು ಪ್ರಾಯೋಜಿಸಲಾಗುವುದು.

೩.   ಇಲಾಖೆಯ ಸಾಂಸ್ಕತಿಕ ಸೌರಭ ಯೋಜನೆಯಡಿ ಹಾಗೂ ತಾವೇ ಸಂಘಟಿಸುವ ಕಾರ್ಯಕ್ರಮಗಳಡಿ ಈ ಕಲಾವಿದರಿಗೆ ಸಾಂಸ್ಕತಿಕ ಕಾರ್ಯಕ್ರಮಗಳನ್ನು ನೀಡಲಾಗುವುದು.

ಸಂಗೀತ ತರಬೇತಿ

ಪರಿಶಿಷ್ಟ ಜಾತಿ/ಪಂಗಡಗಳ ವಿದ್ಯಾಥರ್ಿಗಳಿಗೆ ಅವರು ವ್ಯಾಸಂಗ ಮಾಡುತ್ತಿರುವ ವಸತಿನಿಲಯಗಳಲ್ಲಿ ಅಥವಾ ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್ಗಳಲ್ಲಿ, ಶಾಸ್ತ್ರೀಯ ಸಂಗೀತ, ನೃತ್ಯ, ವಾದ್ಯಸಂಗೀತ, ಗಮಕ ಕಲೆಗಳಲ್ಲಿ ತರಬೇತಿ ನೀಡಲಾಗುವುದು

ಜಾನಪದ ಕಲಾ ತರಬೇತಿ : ಸಂಗೀತ ತರಬೇತಿಯ ರೀತಿಯಲ್ಲೇ ಜಾನಪದ ನೃತ್ಯ, ವಾದ್ಯ ಮತ್ತು ಸಂಗೀತ ಕಲಾಪ್ರಕಾರಗಳಲ್ಲಿ ಆಸಕ್ತ ಯುವಜನರನ್ನು ಆಯ್ಕೆ ಮಾಡಿಕೊಂಡು ಈ ತರಬೇತಿ ನೀಡಲಾಗುವುದು

ಸಾಂಸ್ಕೃತಿಕ ಪರಿಕರಗಳಿಗೆ ಧನಸಹಾಯ

ಪರಿಶಿಷ್ಟ ಜಾತಿ/ಪಂಗಡದ ಕಲಾವಿದರು ಅಥವಾ ಸಂಘ ಸಂಸ್ಥೆಗಳಿಗೆ ಅವುಗಳ ಕಲಾಪೋಷಣೆಗೆ ಅಗತ್ಯವೆನಿಸುವ ವಾದ್ಯಪರಿಕರಗಳನ್ನು, ರಂಗಪರಿಕರಗಳನ್ನು, ವೇಷಭೂಷಣಗಳನ್ನು ಹಾಗೂ ಪೀ� ೋಪಕರಣಗಳನ್ನು ಖರೀದಿಸಲು ಧನ ಸಹಾಯ ನೀಡಲಾಗುವುದು.

ಸಾಂಸ್ಕೃತಿಕ ಮಂದಿರ ನಿರ್ಮಾಣ

ಪರಿಶಿಷ್ಟ ಜಾತಿ/ಪಂಗಡದ ನೋಂದಾಯಿತ ಸಂಸ್ಥೆಗಳು ತಮ್ಮ ಸಾಂಸ್ಕತಿಕ ಚಟುವಟಿಕೆಗಳನ್ನು ಇನ್ನಷ್ಟು ಚುರುಕುಗೊಳಿಸಿ, ವಿಸ್ತಾರಗೊಳಿಸುವ ಸಲುವಾಗಿ ಇವುಗಳಿಗೆ ಸ್ವಂತ ನಿವೇಶನ ಇದ್ದರೆ, ಆ ನಿವೇಶನದಲ್ಲಿ ಸಾಂಸ್ಕತಿಕ ಮಂದಿರಗಳನ್ನು ನಿರ್ಮಾಣಿಸಲು ಧನಸಹಾಯ ನೀಡಲಾಗುವುದು.

ಸಾಂಸ್ಕೃತಿಕ ಉತ್ಸವ, ವಿಚಾರ ಸಂಕಿರಣಗಳಿಗೆ ಧನಸಹಾಯ

ಪರಿಶಿಷ್ಟ ಜಾತಿ/ಪಂಗಡದ ಕಲಾವಿದರಿಗೆ ನೋಂದಾಯಿತ ಸಂಘ ಸಂಸ್ಥೆಗಳು ಏರ್ಪಡಿಸುವ ಕಲಾಮೇಶ, ಸಾಂಸ್ಕತಿಕ ಉತ್ಸವ, ವಿಚಾರ ಸಂಕಿರಣ ಮೊದಲಾದ ಕಾರ್ಯಕ್ರಮಗಳನ್ನು ಏರ್ಪಡಿಸಲು ಧನಸಹಾಯ ನೀಡಲಾಗುವುದು.

ಇತ್ತೀಚಿನ ನವೀಕರಣ​ : 12-06-2019 02:27 PM ಅನುಮೋದಕರು: Admin



ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕನ್ನಡ ಮತ್ತು ಸಂಸ್ಕೃತಿ ಸಚಿವಾಲಯ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080